Karnataka SSLC Science Model Question Paper 2 Kannada Medium

Karnataka SSLC Science Model Question Paper 2 Kannada Medium is part of Karnataka SSLC Science Model Question Papers. Here we have given Karnataka SSLC Social Science Model Question Paper 2 Kannada Medium.

BoardKSEEB, Karnataka Board
TextbookKTBS, Karnataka
ClassSSLC Class 10
SubjectScience
Paper SetModel Paper 2
CategoryKarnataka Board Model Papers

Karnataka SSLC Science Model Question Paper 2 Kannada Medium

ಸಮಯ: 3 ಗಂಟೆಗಳು
ಗರಿಷ್ಠ ಅಂಕಗಳು: 80

I ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅತ್ಯಂತ ಸೂಕ್ತವಾದ ಆಯ್ಕೆಯನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ. [10 × 1 = 10]

Question 1.
ಕಬ್ಬಿಣದ ಮೊಳೆಯನ್ನು CuSO4 ದ್ರಾವಣಕ್ಕೆ ಸೇರಿಸಿದಾಗ ಉಂಟಾಗುವ ಬಣ್ಣದಲ್ಲಿನ ಬದಲಾವಣೆ
A) ನೀಲಿ
B) ಹಸಿರು
C) ಕೆಂಪು
D) ತಿಳಿಹಳದಿ

Question 2.
ಕೆಳಗಿನವುಗಳಲ್ಲಿ ವಿದ್ಯುತ್‌ವಾಹಕವಲ್ಲದ ಜಲೀಯ ದ್ರಾವಣ
A) ಆಸಿಟಿಕ್ ಆಮ್ಲ
B) ಈಥೈಲ್ ಅಸಿಟೇಟ್ ದ್ರಾವಣ
C) NaCl ದ್ರಾವಣ
D) ಎಥನಾಲ್

Question 3.
ಉಸಿರಾಟದಲ್ಲಿ ಗಾಳಿಯ ಚಲನೆಯ ಸರಿಯಾದ ಅನುಕ್ರಮಣಿಕೆ
A) ನಾಸಿಕರಂಧ್ರ → ಗಾಳಿ ಚೀಲಗಳು → ಶ್ವಾಸನಾಳ → ಬ್ರಾಂಕಸ್
B) ನಾಸಿಕರಂದ್ರ → ಶ್ವಾಸಕೋಶ → ಶ್ವಾಸನಳಿಕೆ → ಗಂಟಲು → ಆಲ್ವಿಯೋಲೆ
C) ನಾಸಿಕರಂದ್ರ → ಗಂಟಲು → ಶ್ವಾಸನಾಳ → ಶ್ವಾಸನಾಳದ ಕವಲು → ಆಲ್ವಿಯೋಲೈ
D) ನಾಸಿಕರಂದ್ರ → ಶ್ವಾಸನಾಳ → ಗಂಟಲು → ಆಲ್ವಿಯೋಲೈ → ಶ್ವಾಸನಾಳದ ಕವಲು

Question 4.
ಗೃಹಬಳಕೆಯ ವಿದ್ಯುತ್ ಉಪಕರಣಗಳ ರಕ್ಷಣೆಯಲ್ಲಿ ನಾವು ಇದನ್ನು ಬಳಸುತ್ತೇವೆ.
A) ಬಲ್ಸ್
B) ಸ್ವಿಚ್
C) ವಿದ್ಯುತ್ ಮೀಟರ್
D) ನ್ಯೂಸ್

Question 5.
ಅತಿ ಹೆಚ್ಚು ದ್ರವಣ ಬಿಂದು ಹೊಂದಿರುವುದು
A) ಮೆಥಾಲ್
B) ಸೋಡಿಯಂ ಕ್ಲೋರೈಡ್
C) ಬೋಮಿನ್
D) ಸೀಸಿಯಂ

Question 6.
ಆವರ್ತಕೋಷ್ಟಕದಲ್ಲಿ ‘X’ ಧಾತುವು 3ನೇ ಆವರ್ತದಲ್ಲಿದ್ದು ಅತ್ಯಂತ ಕಡಿಮೆ ಪರಮಾಣು ಗಾತ್ರವನ್ನು ಹೊಂದಿದೆ. ಹಾಗಾದರೆ ಅದು ಹೊಂದಿರುವ ಗುಣ,
A) ಲೋಹೀಯ ಗುಣ
B) ವಿದ್ಯುದ್ದನೀಯ
C) ಅಲೋಹೀಯ ಗುಣ
D) ಇಲೆಕ್ಟ್ರಾನ್ ದಾನಿ

Question 7.
ಬಿಡುಗಡೆಯಾದ ಅಂಡವನ್ನು ಸ್ವೀಕರಿಸುವ ಭಾಗ
A) ಫೆಲೋಪಿಯನ್ ನಾಳ
B) ಗರ್ಭಕೋಶ
C) ಯೋನಿ
D) ಅಂಡಾಶಯ

Question 8.
ವಸ್ತುವನ್ನು ಪೀನಮಸೂರದ F1 ನಲ್ಲಿಟ್ಟಾಗ ಪ್ರತಿಬಿಂಬದ ಗಾತ್ರವು.
A) ಚುಕ್ಕೆ ಗಾತ್ರದಷ್ಟು
B) ಚಿಕ್ಕದು
C) ಸಮಾನ ಗಾತ್ರ
D) ದೊಡ್ಡದು

Question 9.
ಕಣ್ಣಿನ ಮಸೂರ ತನ್ನ ಸ್ಥಿತಿಸ್ಥಾಪಕ ಗುಣ ಕಳೆದುಕೊಳ್ಳುವುದು ಮತ್ತು ಸಿಲಿಯಂ ಸ್ನಾಯುಗಳು ದುರ್ಬಲಗೊಂಡಾಗ ಉಂಟಾಗಬಹುದಾದ ಕಣ್ಣಿನ ದೋಷ.
A) ದೂರ ದೃಷ್ಟಿ
B) ಸಮೀಪದೃಷ್ಟಿ
C) ಪ್ರೆಸ್ ಬಯೋಪಿಯ
D) ಡಯಾಬಿಟಿಕ್ ರೆಟಿನೋಪತಿ

Question 10.
ಕೆಂಪು ರಕ್ತಕಣಗಳ ಆಕ್ಸಿಜನ್ ಸಾಗಾಣಿಕೆಯನ್ನು ಕಡಿಮೆ ಮಾಡುವ ಮಾಲಿನ್ಯಕಾರಕ
A) CO
B) CO2
C) SO2
D) NO2

II ಹೊಂದಿಸಿ ಬರೆಯಿರಿ. [4 × 1 = 4]

Question 11.
Karnataka SSLC Science Model Question Paper 2 Kannada Medium 11

III ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. [7 × 1 = 7]

Question 12.
ಹಲ್ಲು ಉಜ್ಜಲು ಪ್ರತ್ಯಾಮ್ಲಯ ಪೇಸ್ಟನ್ನೇ ಬಳಸಬೇಕು. ಏಕೆ?

Question 13.
ಸ್ಪರ್ಶಾನುವರ್ತನೆಗೆ ಒಂದು ಉದಾಹರಣೆ ಕೊಡಿ.

Question 14.
ವಿದ್ಯುತ್ ಮೋಟಾರಿನ ತತ್ವವನ್ನು ತಿಳಿಸಿ.

Question 15.
ವಾಷಿಂಗ್ ಸೋಡವನ್ನು ಬಳಸಿ ಎಥನಾಲ್ ಮತ್ತು ಎಥನೋಯಿಕ್ ಆಮ್ಲಗಳನ್ನು ಹೇಗೆ ಪತ್ತೆ ಹಚ್ಚುವಿರಿ?

Question 16.
ಆನುವಂಶೀಯ ದಿಕ್ಕುತಿ ಎಂದರೇನು?

Question 17.
2m ಸಂಗಮದೂರವುಳ್ಳ ನಿಮ್ಮ ಮಸೂರದ ಸಾಮರ್ಥ್ಯವೆಷ್ಟು?

Question 18.
ಸೌರಕುಕ್ಕರಿಗೆ ಬಿಳಿಯ ಬಣ್ಣ ಬಳಿಯುವುದರಿಂದ ಉಂಟಾಗುವ ಪರಿಣಾಮವೇನು?

IV ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. [16 × 2 = 32]

Question 19.
ಎಥನಾಲನ್ನು 443K ತಾಪಕ್ಕೆ ಕಾಸುವಾಗ H2SO4 ಏಕೆ ಬಳಸುತ್ತಾರೆ? ಸಮೀಕರಣ ಬರೆಯಿರಿ.

Question 20.
ವಾಷಿಂಗ್ ಸೋಡಾದ 2 ಅನ್ವಯಗಳನ್ನು ತಿಳಿಸಿ,
ಅಥವಾ
ಭೀಚಿಂಗ್ ಪುಡಿಯನ್ನು ಹೇಗೆ ತಯಾರಿಸುತ್ತಾರೆ? ಸಮೀಕರಣ ಬರೆಯಿರಿ.

Question 21.
ಲೋಹಗಳ ಕ್ರಿಯಾಶೀಲತೆಯ ಸರಣಿಯ ಅನ್ವಯಗಳೇನು?
ಅಥವಾ
Na, Al, Mg, Au, K, Pb, Zn, Ca, Fe ಗಳನ್ನು ಅವುಗಳ ಕ್ರಿಯಾಶೀಲತೆಯ ಏರಿಕೆಯ ಆಧಾರದಲ್ಲಿ ಜೋಡಿಸಿ.

Question 22.
ದಂಡಕಾಂತದ ಸುತ್ತಲಿನ ಕಾಂತೀಯ ಬಲರೇಖೆಗಳನ್ನು ತೋರಿಸುವ ಚಿತ್ರ ಬರೆಯಿರಿ. ಬಲರೇಖೆಗಳ ದಿಕ್ಕನ್ನು ಸೂಚಿಸಿ.

Question 23.
ಮಾನವರಲ್ಲಿ ಗ್ಲುಕೋಸ್ ವಿಭಜನೆಯ ವಿವಿಧ ಹಂತಗಳನ್ನು ತಿಳಿಸಿ.

Question 24:
ವಾಹಕದ ರೋಧವನ್ನು ಅವಲಂಬಿಸಿದ ಅಂಶಗಳಾವುವು?
ಅಥವಾ
ವಿದ್ಯುತ್ ಟೋಸ್ಟರ್ ಮತ್ತು ಇಸ್ತ್ರಿಪೆಟ್ಟಿಗೆಯ ಸುರುಳಿಗಳನ್ನು ಶುದ್ಧ ಲೋಹದ ಬದಲಿಗೆ ಮಿಶ್ರಲೋಹಗಳಿಂದ ತಯಾರಿಸಿರುತ್ತಾರೆ. ಏಕೆ?

Question 25.
ಜೈವಿಕ ಶಿಥಿಲೀಯವಲ್ಲದ ತ್ಯಾಜ್ಯಗಳು ಪರಿಸರದ ಮೇಲೆ ಬೀರುವ ಎರಡು ಪರಿಣಾಮಗಳನ್ನು ತಿಳಿಸಿ. ಇವುಗಳ ಸುರಕ್ಷಿತ ವಿಲೇವಾರಿಗೆ ಎರಡು ವಿಧಾನಗಳನ್ನು ತಿಳಿಸಿ.

Question 26.
ಪ್ರೊಪೇನೋಯಿಕ್ ಆಮ್ಲ ಮತ್ತು ಸೈಕೋ ಹೆಕ್ಟೇನ್‌ಗಳ ರಚನೆಯನ್ನು ಬರೆಯಿರಿ.

Question 27.
K, L, M, N ಮತ್ತು ಧಾತುಗಳ ಪರಮಾಣು ಸಂಖ್ಯೆ 7, 10, 12, 4 ಮತ್ತು 19 ಆದರೆ,

  1. ಅತ್ಯಂತ ಹೆಚ್ಚು ಪರಮಾಣು ಗಾತ್ರ ಹೊಂದಿರುವ ಧಾತು ಯಾವುದು?
  2. ಅತ್ಯಂತ ಕಡಿಮೆ ಕ್ರಿಯಾಶೀಲ ಧಾತು ಯಾವುದು? ಕಾರಣ ತಿಳಿಸಿ,

Question 28.
Karnataka SSLC Science Model Question Paper 2 Kannada Medium 28
ಚಿತ್ರದಲ್ಲಿ ತೋರಿಸಲಾದ A ಮತ್ತು B ಗಳನ್ನು ಗುರುತಿಸಿ, ಅವುಗಳ ಕಾರ್ಯವನ್ನು ತಿಳಿಸಿ.

Question 29.
ಮಗುವಿನ ಲಿಂಗ ನಿರ್ಧಾರದಲ್ಲಿ ತಂದೆಯ ಪಾತ್ರವೇನು? ವಿವರಿಸಿ

Question 30.
ನಿಮಗೆ 3 ವಿಧದ ದರ್ಪಣಗಳನ್ನು ನೀಡಿದೆ, ದರ್ಪಣಗಳನ್ನು ಸ್ಪರ್ಶಿಸದೇ 3 ವಿಧದ ದರ್ಪಣಗಳನ್ನು ಹೇಗೆ ಗುರುತಿಸುವಿರಿ?
ಅಥವಾ
ಅನುಕ್ರಮವಾಗಿ 1.44, 1.47, 1.33 ವಕ್ರೀಭವನ ಸೂಚ್ಯಂಕ ಹೊಂದಿರುವ ಸೀಮೆ ಎಣ್ಣೆ, ಟರ್ಪೆಂಟೈನ್ ಎಣ್ಣೆ ಮತ್ತು ನೀರುಇವುಗಳನ್ನು ನಿಮಗೆ ನೀಡಲಾಗಿದೆ. ಇವುಗಳಲ್ಲಿ ಯಾವುದರಲ್ಲಿ ಬೆಳಕು ಅತ್ಯಂತ ವೇಗವಾಗಿ ಚಲಿಸುತ್ತದೆ?

Question 31.
ಸೌರ ಸ್ಥಿರಾಂಕ ಎಂದರೇನು? ಇದರ ಮೌಲ್ಯವನ್ನು ತಿಳಿಸಿ.
ಅಥವಾ
ಸೌರಶಕ್ತಿಯು ಮಾಲಿನ್ಯದಿಂದ ಮುಕ್ತವೇ? ಏಕೆ?

Question 32.
ಮರುಬಳಕೆ ಮತ್ತು ಮರು ಚಕ್ರೀಕರಣ ವಿಧಾನಗಳಲ್ಲಿ ಯಾವುದು ಉತ್ತಮ? ಏಕೆ?
ಅಥವಾ
ಫೆಮಿಂಗನ ಬಲಗೈ ನಿಯಮವನ್ನು ತಿಳಿಸಿ. ಇದನ್ನು ಆಧರಿಸಿದ ಉಪಕರಣವನ್ನು ತಿಳಿಸಿ.

Question 33.
ಬಲಗೈ ಹೆಬ್ಬೆರಳು ನಿಯಮವನ್ನು ನಿರೂಪಿಸಿ ಅದರ ಅನ್ವಯವನ್ನು ತಿಳಿಸಿ.

Question 34.
ನಿಮ್ಮ ದರ್ಪಣದ F1 ಮತ್ತು 2F1 ಗಳ ನಡುವೆ ವಸ್ತುವನ್ನು ಇರಿಸಿದಾಗ ಉಂಟಾಗುವ ಪ್ರತಿಬಿಂಬವನ್ನು ರೇಖಾ ನಕ್ಷೆಯ ಮೂಲಕ ತೋರಿಸಿ,

V ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. [5 x 3 = 15]

Question 35.
X ಎಂಬ ಲೋಹವು XSO4 ಎಂಬ ಲವಣವನ್ನು ಉಂಟುಮಾಡುತ್ತದೆ. ಈ ಲವಣದ ಜಲೀಯ ದ್ರಾವಣವು ಸೋಡಿಯಂ ಹೈಡ್ರಾಕ್ಸಿಡಿನೊಂದಿಗೆ ವರ್ತಿಸಿ ನೀಲಿ ಒತ್ತರ – Y ಯನ್ನು ಉಂಟುಮಾಡುತ್ತದೆ. X ಲೋಹವು ಆಕ್ಸಿಜನ್‌ನೊಂದಿಗೆ ಹೆಚ್ಚಿನ ತಾಪಡಲ್ಲಿ ವರ್ತಿಸಿ ಕಪ್ಪು ಬಣ್ಣದ 2 ಸಂಯುಕ್ತವನ್ನು ಉಂಟು ಮಾಡುತ್ತದೆ. ಸಮೀಕರಣಗಳೊಂದಿಗೆ X, Y, Z ಗಳನ್ನು ಗುರುತಿಸಿ.

Question 36.
ಕೆಳಗಿನವುಗಳು ಏನನ್ನು ಸಾಗಾಣಿಕೆ ಮಾಡುತ್ತವೆ?
a) ಕೈಲಂ
b) ಪ್ಲೋಯಂ
c) ಪುಪ್ಪುಸಕ ಅಭಿಧಮನಿ
d) ಪುಪ್ಪುಸಕ ಅಪಧಮನಿ
e) ಅಯೋರ್ಟಾ
f) ನೀಚ ಅಭಿಧಮನಿ.
ಅಥವಾ
ಮೂತ್ರ ಉತ್ಪಾದನೆಯ ಮುಖ್ಯ ಹಂತಗಳನ್ನು ತಿಳಿಸಿ.

Question 37.
R1, R2, R3, ಗಳೆಂಬ 3 ರೋಧಕಗಳನ್ನು ಸಮಾಂತರವಾಗಿ ಅಮೀಟರ್ ಮತ್ತು ವೋಲ್ಟಾಮೀಟರ್‌ಗಳೊಂದಿಗೆ ಸಂಪರ್ಕ ಹೊಂದಿರುವ ವಿದ್ಯುನ್ಮಂಡಲಕ್ಕೆ ಸಂಪರ್ಕಿಸಲಾಗಿದೆ. ಚಿತ್ರ ಬರೆದು ವಿದ್ಯುತ್ ಪ್ರವಾಹದ ದಿಕ್ಕನ್ನು ಗುರುತಿಸಿ,

Question 38.
a) ಮಂಡಲರು ತಮ್ಮ ಪ್ರಯೋಗಗಳಿಗೆ ಬಟಾಣಿ ಸಸ್ಯಗಳನ್ನೇ ಆರಿಸಲು ಕಾರಣವೇನು?
b) ಮೆಂಡಲರು ಆರಿಸಿಕೊಂಡ ಯಾವುದಾದರೂ ಎರಡು ವಿಭಿನ್ನ ಲಕ್ಷಣಗಳ ಜೋಡಿಯನ್ನು ಹೆಸರಿಸಿ,
c) ದ್ವಿತಳೀಕರಣದಲ್ಲಿ F2 ಪೀಳಿಗೆಯ ವ್ಯಕ್ತರೂಪ ಅನುಪಾತವನ್ನು ತಿಳಿಸಿ.

Question 39.
ಪೀನ ಮಸೂರದ ಪ್ರಧಾನ ಸಂಗಮ F1 ನಲ್ಲಿ ವಸ್ತುವನ್ನು ಇಟ್ಟಾಗ ಉಂಟಾಗುವ ಪ್ರತಿಬಿಂಬವನ್ನು ರೇಖಾ ಚಿತ್ರದ ಸಹಾಯದಿಂದ ತೋರಿಸಿ, ಪ್ರತಿಬಿಂಬದ ಸ್ವಭಾವವನ್ನು ತಿಳಿಸಿ.

VI ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. [3 x 4 = 12]

Question 40.
ರಾಸಾಯನಿಕ ಗುಣಗಳ ಆಧಾರದಲ್ಲಿ ಲೋಹಗಳು ಮತ್ತು ಅಲೋಹಗಳ ನಡುವಣ 24 ವ್ಯತ್ಯಾಸಗಳನ್ನು ಪಟ್ಟಿಮಾಡಿ.

Question 41.
ಪರಾವರ್ತಿತ ಚಾಪದ ಚಿತ್ರ ಬರೆದು ಕೆಳಗಿನ ಭಾಗಗಳನ್ನು ಗುರುತಿಸಿ.
a) ಜ್ಞಾನೇಂದ್ರಿಯಗಳಿಂದ ಮಿದುಳು ಬಳ್ಳಿಗೆ ಮಾಹಿತಿ ರವಾನಿಸುವ ಭಾಗ
b) ಸಂಪರ್ಕ ಕಲ್ಪಿಸುವ ನ್ಯೂರಾನ್
c) ಕಾರ್ಯ ನಿರ್ವಾಹಕ
d) ಕ್ರಿಯಾವಾಹಿ ನರ

Question 42.
ದೂರದೃಷ್ಟಿಯಿಂದ ಬಳಲುತ್ತಿರುವ ವ್ಯಕ್ತಿಯ ಸಮೀಪ ದೃಷ್ಟಿ ಬಿಂದು 1 ಮೀಟರ್. ಈ ಸಮಸ್ಯೆಯನ್ನು ಪರಿಹರಿಸಲು ಯಾವ ಸಾಮರ್ಥ್ಯದ ಕನ್ನಡಕವನ್ನು ಬಳಸಬೇಕು? (ಸಾಮಾನ್ಯ ದೃಷ್ಟಿಯ ಸಮೀಪ ದೃಷ್ಟಿ ಬಿಂದು – 25cm) ಚಿತ್ರದ ಮೂಲಕ ಸಮಸ್ಯೆ ಮತ್ತು ಪರಿಹಾರವನ್ನು ವ್ಯಕ್ತಪಡಿಸಿ.

 

Answers

I
Answer 1:
B) ಹಸಿರು

Answer 2:
D) ಎಥನಾಲ್

Answer 3:
C) ನಾಸಿಕರಂದ್ರ → ಗಂಟಲು → ಶ್ವಾಸನಾಳ → ಶ್ವಾಸನಾಳದ ಕವಲು → ಆಲ್ವಿಯೋಲೈ

Answer 4:
D) ನ್ಯೂಸ್

Answer 5:
B) ಸೋಡಿಯಂ ಕ್ಲೋರೈಡ್

Answer 6:
C)ಅಲೋಹೀಯ ಗುಣ

Answer 7:
A) ಫೆಲೋಪಿಯನ್ ನಾಳ

Answer 8:
D) ದೊಡ್ಡದು

Answer 9:
C) ಪ್ರೆಸ್ ಬಯೋಪಿಯ

Answer 10:
A) CO

II
Answer 11:
Karnataka SSLC Science Model Question Paper 2 Kannada Medium ans 11

III
Answer 12:
ಹಲ್ಲುಗಳಲ್ಲಿ ಸೇರಿಕೊಂಡ ಬ್ಯಾಕ್ಟಿರಿಯಗಳು ಆಮೀಯ ವಸ್ತು ಸ್ರವಿಸಿ ಹಲ್ಲಿನ ಸವೆತಕ್ಕೆ ಕಾರಣವಾಗುತ್ತದೆ. ಅಮೀಯ ವಸ್ತುವನ್ನು ತಟಸ್ಥಗೊಳಿಸಲು ಪ್ರತ್ಯಾಮ್ಲಯ ಪೇಸ್ತನ್ನು ಬಳಸಬೇಕು.

Answer 13:
ಮುಟ್ಟಿದರೆ ಮುನಿ ಸಸ್ಯದ ಎಲೆಗಳನ್ನು ಮುಟ್ಟಿದಾಗ ಮುದುಡುತ್ತವೆ.

Answer 14:
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ

Answer 15:
ವಾಷಿಂಗ್ಸೋಡವು ಎಥನಾಲ್ನೊಂದಿಗೆ ವರ್ತಿಸುವುದಿಲ್ಲ. ಎಥನೋಯಿಕ್ ಆಮ್ಲದೊಂದಿಗೆ ವಾಷಿಂಗ್ ಸೋಡ ವರ್ತಿಸಿ CO2 ಅನಿಲವನ್ನು ಬಿಡುಗಡೆ ಮಾಡುತ್ತದೆ.

Answer 16:
ಸಣ್ಣ ಸಮೂಹದಲ್ಲಿನ ನೈಸರ್ಗಿಕ ಅವಘಡಗಳು ಕೆಲವು ವಂಶವಾಹಿಗಳ ಪುನರಾವರ್ತನೆಯನ್ನು ಬದಲಾಯಿಸಿ ಹೊಂದಾಣಿಕೆ ಇಲ್ಲದ ವೈವಿಧ್ಯತೆಯನ್ನು ಒದಗಿಸುವುದನ್ನೇ ಅನುವಂಶೀಯ ದಿಕ್ಕುತಿ ಎನ್ನುವರು.

Answer 17:
\(P = \frac {1}{f} = \frac {1}{-2} = -0.5D\)

Answer 18:
ಸೌರಕುಕ್ಕರ್‌ಗೆ ಬಿಳಿಯ ಬಣ್ಣ ಬಳಿಯುವುದರಿಂದ ಆಹಾರ ಬೇಗನೆ ಬೇಯದು, ಏಕೆಂದರೆ ಕಪ್ಪು ಬಣ್ಣಕ್ಕಿಂತ ಬಿಳಿ ಬಣ್ಣದ ಉಷ್ಣ ಹೀರುವಿಕೆ ಸಾಮರ್ಥ್ಯ ಕಡಿಮೆ.

IV
Answer 19.
ಸಾರಯುಕ್ತ H2SO4 ನಿರ್ಜಲಕಾರಕವಾಗಿ ಕೆಲಸ ಮಾಡುತ್ತದೆ.
ಕಾಸಿದಾಗ CHOH
Karnataka SSLC Science Model Question Paper 2 Kannada Medium ans 19
Answer 20:

  1. ಗಾಜು, ಕಾಗದ, ಸಾಬೂನು ಕೈಗಾರಿಕೆಗಳಲ್ಲಿ ಬಳಸುತ್ತಾರೆ.
  2. ಬೋರಾಕ್ಸ್ ಮತ್ತು ಸ್ವಚ್ಚಕಾರಕಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಅಥವಾ
ಶುಷ್ಕ ಸುಣ್ಣದೊಂದಿಗೆ ಕ್ಲೋರಿನ್‌ನ ಪ್ರತಿವರ್ತನೆಯಿಂದ ಭೀಚಿಂಗ್ ಪುಡಿಯನ್ನು ತಯಾರಿಸುತ್ತಾರೆ.
Ca(OH)2 + Cl → CaOCl2 + H2O

Answer 21:

  1. ಕ್ರಿಯಾಶೀಲತೆಯ ಸರಣಿಯಿಂದ ಲೋಹೋದ್ದರಣ ಮಾಡುವುದು ಸುಲಭವಾಗುತ್ತದೆ.
  2. ಕ್ರಿಯಾಶೀಲತೆಯ ಸರಣಿಯ ಜ್ಞಾನದಿಂದ ಹೆಚ್ಚು ಕ್ರಿಯಾಶೀಲಧಾತು ಕಡಿಮೆ ಕ್ರಿಯಾಶೀಲ ಧಾತುವನ್ನು ಸ್ಥಾನಪಲ್ಲಟಗೊಳಿಸುವ ರಾಸಾಯನಿಕ ಕ್ರಿಯೆಯ ಸಾಧ್ಯತೆಯನ್ನು ತಿಳಿಯಬಹುದು.

ಅಥವಾ
Au < Pb < Fe < Zn < Al < Mg < Ca < Na < K

Answer 22:
Karnataka SSLC Science Model Question Paper 2 Kannada Medium ans 22

Answer 23:
Karnataka SSLC Science Model Question Paper 2 Kannada Medium ans 23

Answer 24:

  1. ವಾಹಕದ ಉದ್ದ
  2. ವಾಹಕದ ಅಡ್ಡಕೊಯ್ತ
  3. ವಸ್ತುವಿನ ಪ್ರಾಕೃತಿಕ ಗುಣ
  4. ತಾಪ

ಅಥವಾ
ಕಾರಣ;

  1. ಮಿಶ್ರಲೋಹಗಳ ರೋಧಶೀಲತೆ ಲೋಹಗಳಿಗಿಂತ ಹೆಚ್ಚು
  2. ಲೋಹಗಳಿಗಿಂತ ಹೆಚ್ಚಿನ ಕರಗುವ ಬಿಂದು ಹೊಂದಿರುತ್ತವೆ.

Answer 25:

  1. ಜೈವಿಕ ಶಿಥಿಲೀಯವಲ್ಲದ ತ್ಯಾಜ್ಯಗಳು ಪರಿಸರದಲ್ಲಿ ದೀರ್ಘಕಾಲದವರೆಗೆ ಸಂಗ್ರಹಗೊಳ್ಳುತ್ತವೆ ಮತ್ತು ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತದೆ.
  2. ಪರಿಸರ ವ್ಯವಸ್ಥೆಯನ್ನು ಹಾಳುಮಾಡುತ್ತವೆ.

Answer 26:
Karnataka SSLC Science Model Question Paper 2 Kannada Medium ans 26

Answer 27:

  1. 0 – 19 – 2, 8, 8, 1 – 4 ಕವಚಗಳನ್ನು ಹೊಂದಿದೆ.
  2. L – 10 = 2, 8, – ಅಷ್ಟಕ ವಿನ್ಯಾಸ ಹೊಂದಿರುವುದರಿಂದ ರಾಸಾಯನಿಕವಾಗಿ ಜಡವಾಗಿದೆ.

Answer 28:
A – ಪರಾಗ ನಳಿಕೆ; ಇದು ಗಂಡು ಲಿಂಗಾಣುಗಳು ಅಂಡಾಶಯಕ್ಕೆ ತಲುಪಲು ಸಹಾಯಕಾರಿ.
B – ಅಂಡಾಶಯ; ಇದು ಹೆಣ್ಣು ಲಿಂಗಾಣುಗಳನ್ನು ಉತ್ಪತ್ತಿ ಮಾಡುತ್ತದೆ.

Answer 29:
ಮಗುವಿನ ಲಿಂಗ ನಿರ್ಧಾರದಲ್ಲಿ ತಂದೆಯ ಪಾತ್ರವೇ ಪ್ರಮುಖವಾಗಿದೆ. ತಾಯಿಯಲ್ಲಿ XX ಕ್ರೋಮೋಸೋಮ್‌ಗಳಿದ್ದು ತಂದೆಯಲ್ಲಿ XY ಕ್ರೋಮೋಸೋಮ್‌ಗಳಿವೆ. ಗರ್ಭಧಾರಣೆಯ ಸಂದರ್ಭದಲ್ಲಿ ತಂದೆಯಿಂದ X ವರ್ಣ ತಂತು ಬಂದಲ್ಲಿ ಮಗು ಹೆಣ್ಣಾಗುತ್ತದೆ. Y ಕ್ರೋಮೋಸೋಮ್ ಬಂದಲ್ಲಿ ಮಗುಗಂಡಾಗುತ್ತದೆ.

Answer 30:
ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬದ ಸ್ವಭಾವದಿಂದ ದರ್ಪಣಗಳನ್ನು ಸುಲಭವಾಗಿ ಗುರುತಿಸಬಹುದು.

  1. ಪ್ರತಿಬಿಂಬದ ಗಾತ್ರವು ವಸ್ತುವಿನಷ್ಟೇ ಇದ್ದಲ್ಲಿ ಅದು ಸಮತಲ ದರ್ಪಣ
  2. ನೇರ ಮತ್ತು ಚಿಕ್ಕದಾದ ಪ್ರತಿಬಿಂಬ ಉಂಟಾದರೆ ಅದು ಪೀನ ದರ್ಪಣ.
  3. ತಲೆಕೆಳಗಾದ ಹಾಗೂ ವಿವಿಧ ಗಾತ್ರದ ಪ್ರತಿಬಿಂಬ ಉಂಟಾದರೆ ಹಾಗೂ ದರ್ಪಣದ ಸಮೀಪಕ್ಕೆ ಹೋದಂತೆ ನೇರ ಮತ್ತು ದೊಡ್ಡದಾದ ಪ್ರತಿಬಿಂಬ ಉಂಟಾದಲ್ಲಿ ಅದನ್ನು ನಿಮ್ಮ ದರ್ಪಣವೆಂದು ಗುರುತಿಸಬಹುದು.

ಅಥವಾ
ನೀರಿನ ವಕ್ರೀಭವನ ಸೂಚ್ಯಂಕ 1.33 ಅತ್ಯಂತ ಕಡಿಮೆ ಏಕೀಭವನ ಸೂಚ್ಯಂಕ ಹೊಂದಿದೆ. ಆದ್ದರಿಂದ ನೀರಿನ ಮಾಧ್ಯಮದಲ್ಲಿ ಬೆಳಕು ಅತ್ಯಂತ ವೇಗವಾಗಿ ಚಲಿಸುತ್ತದೆ.

Answer 31:
ಪ್ರತಿ ಏಕಮಾನ ಕ್ಷೇತ್ರ ಪಡೆಯುವ ಸೌರಶಕ್ತಿಗೆ ಸೌರಸ್ಥಿರಾಂಕ ಎನ್ನುವರು. ಸೌರಸ್ಟಿರಾಂಕದ ಬೆಲೆ – 1.4J/s/m2 ಅಥವಾ 1.4kW/m2
ಅಥವಾ
ಸೌರಶಕ್ತಿಯ ಆಕರವೂ ಮಾಲಿನ್ಯದಿಂದ ಮುಕ್ತವಲ್ಲ. ಏಕೆಂದರೆಸೌರಕೋಶದಲ್ಲಿ ಬಳಸುವ ಸಿಲಿಕಾನ್ ಸಂಸ್ಕರಣೆ ಮಾಲಿನ್ಯವನ್ನುಂಟು ಮಾಡಬಹುದು.

Answer 32:
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮರುಬಳಕೆ ಅತ್ಯುತ್ತಮ. ಏಕೆಂದರೆ,

  1. ಶಕ್ತಿ ವ್ಯಯವಾಗುವುದಿಲ್ಲ.
  2. ಬಳಸಿದ ವಸ್ತುಗಳನ್ನು ಯಾವುದೇ ಸಂಸ್ಕರಣೆಗೆ ಒಳಪಡಿಸದೇ ಮತ್ತೆ ಮತ್ತೆ ಬಳಸಬಹುದು. ಉದಾ: ಪಾಲಿಥೀನ್ ಕೈ ಚೀಲ.

ಅಥವಾ

  1. ಬಲಗೈನ ಹೆಬ್ಬೆರಳು, ತೋರು ಬೆರಳು ಮತ್ತು ಮಧ್ಯದ ಬೆರಳುಗಳನ್ನು ಪರಸ್ಪರ ಲಂಬವಾಗಿರುವಂತೆ ಇರಿಸಿದಾಗ ತೋರುಬೆರಳು ಕಾಂತಕ್ಷೇತ್ರದ ನೇರವನ್ನು, ಹೆಬ್ಬೆರಳು ವಾಹಕದ ಚಲನೆಯ ನೇರವನ್ನು ಹಾಗೂ ಮಧ್ಯದ ಬೆರಳು ಪ್ರೇರಿತ ವಿದ್ಯುತ್ಪವಾಹದ ದಿಕ್ಕನ್ನು ಸೂಚಿಸುತ್ತದೆ.
  2. ವಿದ್ಯುತ್ ಮೋಟಾರು.

Answer 33:
ವಿದ್ಯುತ್ ಪ್ರವಹಿಸುತ್ತಿರುವ ನೇರವಾದ ವಾಹಕವನ್ನು ಬಲಗೈಯಲ್ಲಿ ಹಿಡಿದಾಗ ಹೆಬ್ಬೆರಳು ವಿದ್ಯುತ್ ಪ್ರವಾಹದ ದಿಕ್ಕನ್ನು ಸೂಚಿಸುತ್ತದೆ, ಕಾಂತಕ್ಷೇತ್ರದ ದಿಕ್ಕನ್ನು ಬೆರಳುಗಳು ಸೂಚಿಸುತ್ತವೆ.

Answer 34:
Karnataka SSLC Science Model Question Paper 2 Kannada Medium ans 34

Answer 35:
X – ತಾಮ್ರ
Y – Cu(OH)2
Karnataka SSLC Science Model Question Paper 2 Kannada Medium ans 35
Z – ತಾಮ್ರದ ಆಕ್ಸೆಡ್
2Cu + O2 + CuO ಕಪ್ಪು ಬಣ್ಣದ ತಾಮ್ರದ ಆಕ್ಸೆಡ್

Answer 36:
a) ಕೈಲಂ – ನೀರು, ಲವಣಗಳು
b) ಶ್ಲೋಯಂ – ಆಹಾರದಂತಹ ಸಾವಯವ ವಸ್ತುಗಳು
c) ಪುಪ್ಪುಸಕ ಅಭಿಧಮನಿ – ಆಕ್ಸಿಜನ್ ಸಹಿತ ರಕ್ತವನ್ನು ಶ್ವಾಸಕೋಶಗಳಿಂದ ಹೃದಯಕ್ಕೆ ತರುತ್ತದೆ.
d) ಪಪಸಕ ಅಪಧಮನಿ – ಆಕ್ಸಿಜನ್ ರಹಿತ ರಕ್ತವನ್ನು ಹೃದಯದಿಂದ ಶ್ವಾಸಕೋಶಗಳಿಗೆ ಸಾಗಿಸುತ್ತದೆ.
e) ಅಯೋರ್ಟಾ – ಹೃದಯದಿಂದ ಆಕ್ಸಿಜನ್ ಯುಕ್ತ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಒಯ್ಯುತ್ತದೆ.
f) ನೀಚ ಅಭಿಧಮನಿ – ದೇಹದ ಕೆಳಭಾಗದಿಂದ ಆಕ್ಸಿಜನ್ ರಹಿತ ರಕ್ತವನ್ನು ಹೃದಯಕ್ಕೆ ತರುತ್ತದೆ.
ಅಥವಾ
ನೆಫ್ರಾನ್ ಮೂತ್ರ ಉತ್ಪಾದಿಸುವ, ಮೂತ್ರ ಜನಕಾಂಗದ ಕಾರ್ಯಾತ್ಮಕ ಘಟಕವಾಗಿದೆ. ನೆಫ್ರಾನಿನ್ ಬೌಮನ್ನನ ಕೋಶದಲ್ಲಿ ರಕ್ತವು ಹೆಚ್ಚಿನ ಒತ್ತಡದಲ್ಲಿ ಸೋಸಲ್ಪಡುತ್ತದೆ. ಇದೇ ಗ್ಲಾಮೆರುಲಸ್‌ನ ಸೂಕ್ಷ ಸೋಸುವಿಕೆ, ನೆಫಾನ್ 3 ಹಂತಗಳಲ್ಲಿ ಮೂತ್ರ ಉತ್ಪಾದಿಸುತ್ತದೆ. ಸೋಸಲ್ಪಟ್ಟ ದ್ರವವು ನಿಕಟ ನಾಲಿಕೆ ನಾಳದ ಮೂಲಕ ಹೆಸ್ಲಿಯ ಕುಣಿಕೆಯತ್ತ ಚಲಿಸುವಾಗ ಗ್ಲುಕೋಸ್, ಅಮೈನೋ ಆಮ್ಲಗಳಂತಹ ಅವಶ್ಯಕ ವಸ್ತುಗಳು ಹೀರಲ್ಪಡುತ್ತವೆ ಈ ಹಂತಕ್ಕೆ ವ್ಯತ್ಯಸ್ಥ ಮರುಹೀರಿಕೆ ಎನ್ನುವರು. ಲೋಮನಾಳದಲ್ಲಿರುವ ಯೂರಿಯ ಮತ್ತು ತ್ಯಾಜ್ಯ ಮತ್ತು ದೂರದ ನಾಲಿಕೆ ನಾಳಕ್ಕೆ ಸ್ರವಿಸಲ್ಪಡುತ್ತದೆ. ಈ ಹಂತಕ್ಕೆ ನಳಿಕಾ ಸ್ರವಿಕೆ ಎನ್ನುವರು.
ಅಂತಿಮವಾಗಿ ಎಲ್ಲಾ ನೆಫ್ರಾನ್‌ಗಳಿಂದ ಸೋಸಲ್ಪಟ್ಟ ದ್ರವ ಮೂತ್ರಕೋಶಗಳಲ್ಲಿ ಸಂಗ್ರಹಗೊಳ್ಳುತ್ತದೆ.

Answer 37:
Karnataka SSLC Science Model Question Paper 2 Kannada Medium ans 37

Answer 38:
a) ಮೆಂಡಲರು ಬಟಾಣಿ ಸಸ್ಯ ಆಯ್ದುಕೊಳ್ಳಲು ಕಾರಣಗಳು

  1. ಸಂಕ್ಷಿಪ್ತ ಅವಧಿಯ ಜೀವನಚಕ್ರ
  2. ಸ್ವಕೀಯ ಮತ್ತು ಪರಕೀಯ ಪರಾಗಸ್ಪರ್ಶ ಮಾಡಬಹುದಾಗಿತ್ತು.

b) ಎರಡು ವಿಭಿನ್ನ ಲಕ್ಷಣಗಳು:

  1. ಗಿಡದ ಎತ್ತರ × ಗಿಡ್ಡ
  2. ಹೂವಿನ ಬಣ್ಣ = ನೇರಳೆ × ಬಿಳಿ
  3. ಬೀಜದ ಬಣ್ಣ = ಹಳದಿ × ಹಸಿರು

c) Fತಳಿ ಪೀಳಿಗೆಯ ವ್ಯಕ್ತ ಅನುಪಾತ 9 : 3 : 3 : 1

Answer 39:
ನಿಮ್ಮ ದರ್ಪಣ
Karnataka SSLC Science Model Question Paper 2 Kannada Medium ans 39

VI
Answer 40:
ಲೋಹಗಳು ಆಕ್ಸಿಜನ್‌ನೊಂದಿಗೆ ವರ್ತಿಸಿ, ಪ್ರತ್ಯಾಮ್ಲಯ ಆನ್ಲೈಡ್‌ಗಳನ್ನು ಉಂಟುಮಾಡುತ್ತದೆ.
4Na + 2O2 → 2Na2O
ಅಲೋಹಗಳು ಆಕ್ಸಿಜನ್‌ನೊಂದಿಗೆ ವರ್ತಿಸಿ ಆಮೀಯ ಆನ್ಲೈಡ್‌ಗಳನ್ನು ಉಂಟುಮಾಡುತ್ತವೆ.
S + O2 → SO2
ಲೋಹಗಳು ಸಾರರಿಕ್ತ ಆಮ್ಲಗಳೊಂದಿಗೆ ವರ್ತಿಸಿ ಹೈಡೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ.
Zn+ 2HCl → ZnCl2 + H2
ಅಲೋಹಗಳು ಸಾರರಿಕ್ ಆಮ್ಲಗಳೊಂದಿಗೆ ವರ್ತಿಸಿ ಹೈಡೋಜನ್ ಅನಿಲವನ್ನು ಬಿಡುಗಡೆ ಮಾಡುವುದಿಲ್ಲ.

Answer 41:
Karnataka SSLC Science Model Question Paper 2 Kannada Medium ans 41

Answer 42:
ಪೀನ ಮಸೂರವನ್ನು ಬಳಸಿ ಸಮಸ್ಯೆಯನ್ನು ಸರಿಪಡಿಸಬಹುದು.
v = 1, m = 100cm; u = -25cm
Karnataka SSLC Science Model Question Paper 2 Kannada Medium ans 42

We hope the given Karnataka SSLC Science Model Question Paper 2 Kannada Medium will help you. If you have any query regarding Karnataka SSLC Science Model Question Paper 2 Kannada Medium, drop a comment below and we will get back to you at the earliest.